ನಾ ಅವನಲ್ಲಾ ಅವಳು….

ಅಂದಿನ 8 ರ ವಯಸ್ಸಿನ ಸವಿ ಸವಿ ನೆನಪು…
ಕಣ್ ಹಂಚ್ಚಲ್ಲಿ ನೂರಾರು ಕನಸು… ಮನದಲ್ಲಿ ದುಗುಡಾ..
ನನ್ನೊಳಗಿನ ಹುಡುಗಿ ನೋಡುತ್ತಿಹಳು ಇಣುಕಿ.. ಇಣುಕಿ…
ನಾ ಅವನಲ್ಲಾ ಅವಳು… ನಾ ಅವನಲ್ಲಾ ಅವಳು…

ಬೆಳಗೆದ್ದು ನಾ ಮಾಡುವೆ ಮನೆ ಕೆಲಸ
ಚಿಕ್ಕಮ್ಮ ಜೆಡೆ ಹಾಕಿ ಹೂ ಮುಡಿಸುವಳು ನನಗೆ
ನಾ ಮುಖ ತೊಳೆದು ನಿಂತಾಗ ಕನ್ನಡಿಯ ಮುಂದೆ
ನನ್ನನ್ನೇ ನಾ ಮರೆವೆ ನಾ ಅವನಲ್ಲಾ ಅವಳು…..

ಪ್ಯಾರಿನ್ ಲವಲಿಯಾ ನಾ ಹಚ್ಚಿ ಕೊಂಡು
ಪೌಡರ್ ಹಾಕಿ ಕೊಂಡು ನನ್ನನು ನಾ ನೋಡಿಕೊಂಡಾಗ..
ನಾಚಿಕೆ ಏಕೂ…ಗೊತ್ತಿಲ್ಲಾ….
ಹಾ … ನಾ…ಮರೆತೆ ಬೊಟ್ಟು ಇಡುವುದನ್ನು ನಾ ಅವನಲ್ಲಾ ಅವಳು…

ಬೊಟ್ಟಿಟ್ಟು ಒಮ್ಮೆ …..ಕನ್ನಡಿಯಲ್ಲಿ
ನನ್ನ ಬಿಂಬವ ನಾ ನೊಡಿ ಕೊಂಡಾಗ ..
ಒಂದಂತು ನಿಜ.. ನನ್ನ ಉಡುಗೆ ಮಾತ್ರ ಗಂಡು…
ನನ್ನ ಅಂತರಾಳದಲ್ಲಿ ನಾ.. ಹೆಣ್ಣು.. ನಾ ಅವನಲ್ಲ ಅವಳು….

ನಾ ಅವನಲ್ಲ ಅವಳು ಎಂದು ನನ್ನ ಉಳುವಿಗಾಗಿ
ನಾನ್ಯಾರೆಂಬುದನ್ನು ಸಮಾಜದಲ್ಲಿ ಕೂಗಿ …ಕೂಗಿ
ನನ್ನ ಧ್ವನಿ ಸೊರಗುವ ಸಮಯದಲ್ಲಿ
ಸರ್ವೋಚ ನ್ಯಾಯಾಲಯ ಹೇಳಿತ್ತು ಇಂದು ನೀ ಹೆಣ್ಣು….

By Umesh.P

Advertisements

About Jeeva

Jeeva was registered on 5th November 2012 as a Trust its purpose and focus was on addressing issues around mental health, livelihood and community media for sexual minorities in Karnataka.
This entry was posted in News and tagged , , , , , . Bookmark the permalink.

2 Responses to ನಾ ಅವನಲ್ಲಾ ಅವಳು….

  1. Trimurthy says:

    Nice

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s